" ಕ್ಷಣ ಹೊತ್ತು ಅಣಿ ಮುತ್ತು" ಅನ್ನುವ ಹೇಳಿಕೆಯಂತೆ ಉತ್ತಮವಾದ ಕೆಲಸಕ್ಕೆ ವಿನಿಯೋಗಿಸಿದ ಸಮಯೂ ಸದಾ ಅಮೂಲ್ಯ ವಾಗಿರುತ್ತದೆ. ಆ ಅಮೂಲ್ಯವಾದ ಕೊಡುಗೆಯನ್ನು ನಾವು ನಮ್ಮ ಜೀವನದಲ್ಲಿ ಸದಾ ಉಪಯುಕ್ತವಾಗಿ ಉಪಯೋಗಿಸಿಕೊಳ್ಳಬಹುದು.
ಇಡೀ ಜಗತ್ತಿನ ಜನತೆ ಕೊರೊನಾ ಎಂಬ ಮಹಾಮಾರಿಗೆ ತಲ್ಲಣಿಸಿ ಹೋಗಿದೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಡೀ ವಿಶ್ವದ ಜನತೆ ಅನೇಕ ಸಂಕಷ್ಟ ಸವಾಲುಗಳನ್ನು ಎದುರಿಸುತ್ತಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಎಲ್ಲ ರೀತಿಯಿಂದಲೂ ಇಡೀ ಸಮಾಜ ಅನೇಕ ಸವಾಲುಗಳನ್ನು ಎದುರಿಸುತ್ತಿದೆ.
'ಆರೋಗ್ಯವೇ ಭಾಗ್ಯ' ಎನ್ನುವ ಗಾದೆ ಮಾತಿನಂತೆ ಕೋವಿಡ್ ಮಹಾಮಾರಿ ಎಲ್ಲರಲ್ಲೂ ಆರೋಗ್ಯದ ಜಾಗೃತಿ ಮೂಡಿಸಿದೆ. 'ಜೀವ ಉಳಿದರೆ ಜೀವನ'. ಆದರೆ ಈ ಎಲ್ಲ ಸವಾಲುಗಳ ಮಧ್ಯೆ ಜೀವನ ನಡೆಸಲೇಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಶಿಕ್ಷಣ ಇಲಾಖೆ ಶಿಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶವನ್ನು ಒದಗಿಸಿದೆ.
ಈ ಸಮಯವನ್ನು ನಾವು ವ್ಯರ್ಥ ಮಾಡದೆ ಸರಿಯಾಗಿ ಉಪಯೋಗಿಸುವ ಮೂಲಕ ಈ ಯೋಜನೆಯ ಸಾರ್ಥಕತೆಯನ್ನು ಅನುಭವಿಸಬಹುದು. ಹಲವು ಬಗೆಯ ಪುಸ್ತಕಗಳನ್ನು ಓದಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪೂರಕವಾಗಿದೆ. ವಿಡಿಯೋ ಮತ್ತು ಆಡಿಯೋಗಳ ತಯಾರಿಯು ಹೊಸದಾದ ಅನುಭವವನ್ನು ನೀಡುತ್ತದೆ. ನಾವು ಬೋಧಿಸುವ ವಿಧಾನ ಹಾಗೂ ನಮ್ಮ ಬೋಧನೆಯನ್ನು ನಾವೇ ಸ್ವತಃ ವೀಕ್ಷಿಸಿ ಅವಲೋಕನ ಮಾಡಿಕೊಳ್ಳಲು ಒಂದು ಪ್ರಮುಖ ಸಾಧನವಾಗಿದೆ. ಹೊಸ ಕಲಿಕೋಪಕರಣಗಳ ತಯಾರಿಕೆ, ಪಾಠ ಯೋಜನೆಯ ಸಿದ್ಧತೆ, ಪ್ರಶ್ನೆ ಪತ್ರಿಕೆಯ ಸಿದ್ಧತೆ, ಸೇತುಬಂಧ ಯೋಜನೆ ಸಿದ್ಧತೆ,ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳ ವೀಕ್ಷಣೆ ಇವು ನಮ್ಮ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ನಮಗೆ ಹೊಸ ವಿಷಯ ಬೋಧನಾ ವಿಧಾಗಳನ್ನು ಕೂಡಾ ಕಲಿಯಲು ಅವಕಾಶ ನೀಡಿತು. ಮಕ್ಕಳ ಕಲಿಕೆಗೆ ಸಂಬಂಧಿಸಿದ ಅನೇಕ ಅ್ಯಪಗಳನ್ನು ತಿಳಿದುಕೊಳ್ಳಲು ಸಹಾಯವಾಯಿತು. ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳೊಂದಿಗಿನ ಸಂಭಾಷಣೆ ನಮ್ಮನ್ನು ಶಾಲೆಯ ವಾತವರಣ ನೆನಪಿಸಿತು, ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ನಿಂದ ಹೇಗೆ ನಮ್ಮನ್ನು ಸುರಕ್ಷಿತವಾಗಿ ಇರಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸುವುದರ ಮೂಲಕ ಅವರಲ್ಲಿದ್ದ ಆತಂಕವನ್ನು ದೂರ ಮಾಡಿ, ಮನೆಯಿಂದಲೇ ಹೇಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳು ಹೇಗೆ ಮನೆಯಿಂದಲೇ ಬೋಧನೆ-ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಅರಿಯಲು ಸಾಧ್ಯವಾಯಿತು. ಒಟ್ಟಿನಲ್ಲಿ ಈ ಮನೆಯಿಂದಲೇ ಕೆಲಸದಡಿಯಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ಹೆಚ್ಚು ತಿಳಿದುಕೊಳ್ಳಲು ಸಹಾಯವಾಯಿತು. ಮೊಬೈಲ್ ಫೋನ್ ನನ್ನು ಎಷ್ಟು ಉತ್ತಮ ರೀತಿಯಲ್ಲಿ ಉಪಯೋಗಿಸಬಹುದು ಎಂದು ತಿಳಿಯಲಾಯಿತು. ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೇಗೆಲ್ಲಾ ಮಾಡಬಹುದು ಎಂಬುವುದನ್ನು ಪ್ರಾಯೋಗಿಕವಾಗಿ ತಿಳಿಯಲು ಇದು ಒಂದು ಉತ್ತಮ ಸದಾವಕಾಶ.
ಶ್ರೀಮತಿ ಸರಿತಾ ಸ.ಶಿ.
ಸರಕಾರಿ ಆದರ್ಶ ವಿದ್ಯಾಲಯ ಬೇಮಳಖೇಡ
ತಾ: ಹುಮನಾಬಾದ, ಜಿ: ಬೀದರ್
No comments:
Post a Comment