Sunday, 26 July 2020

ಅಸೈನ್ಮೆಂಟ್-೧೦ ಶ್ರಿಮತಿ ಸರಿತಾ

ಕೋವಿಡ್-೧೯ ವೈರಸ್ ಸೊಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ(ಕಲಿಕೆಯಲ್ಲಿ ಸದಾ ತೊಡಗುವಂತೆ ಮಾಡಲು) ತಮ್ಮ ಸಲಹೆ ಮತ್ತು ಕಾರ್ಯ ತಂತ್ರಗಳ ಪಟ್ಟಿ.
  • ಮನೆಯಿಂದಲೇ ಕಲಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಫೋನ ಮುಖಾಂತರ ಕರೆ ಮಾಡಿ ಸಂಭಾಷಣೆ ಮಾಡುವುದು.
  • ವಿದ್ಯಾರ್ಥಿಗಳ ವಾಟ್ಸ ಅಪ್ ಗ್ರೂಪ್ ಕ್ರಿಯೆಟ್ ಮಾಡಿ ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನೀಡುವುದು,ನೋಟ್ಸಗಳನ್ನು ಕಳುಹಿಸುವುದು ಹಾಗೂ ಅವರು ಮಾಡಿದ ಮನೆಕೆಲಸ ಮತ್ತು ಚಟುವಟಿಕೆಗಳನ್ನು ಗುಂಪಿಗೆ ಕಳುಹಿಸಲು ತಿಳಿಸುವುದು.
  • ಶಿಕ್ಷಕರು ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಪರಿಶೀಲಿಸಿ ಹಿಮ್ಮಾಹಿತಿ ನೀಡುವುದು.
  • ಮನೆಯಲ್ಲಿ ಶಿಕ್ಷಿತ ಪಾಲಕ/ಪೋಷಕರು ಮಕ್ಕಳ ಅಭ್ಯಾಸದ ಕುರಿತು ಗಮನ ಹರಿಸುವುದು.
  • ಹಳೆಯ ಪುಸ್ತಕಗಳನ್ನು ಪುನರಾವಲೋಕನ ಮಾಡುವುದು.
  • ತಮ್ಮ ಸ್ನೇಹಿತರು ಅಥವಾ ಸಹೋದರ ಸಹೋದರಿಯರಿಂದ ಪುಸ್ತಕಗಳನ್ನು ಪಡೆದು ಅಧ್ಯಯನ ಮಾಡುವುದು.
  • ಯೂಟ್ಯೂಬ್ ನಲ್ಲಿ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಗಳನ್ನು ನೋಡಲು ತಿಳಿಸುವುದು.
  • ಶಿಕ್ಷಣಕ್ಕೆ ಸಂಬಂಧಿಸಿದ ಅ್ಯಪ್ ಗಳಾದ ಖಾನ್ ಅಕಾಡಮಿ,ದಿಕ್ಷಾ ಅ್ಯಪ್, ಶಗೂನ್ ಅ್ಯಪ್, ಬೈಜುಸ್ ಅ್ಯಪ್ ಹತ್ತು ಹಲವು ಬಗೆಯ ಅ್ಯಪ್ ಗಳು ಲಭ್ಯವಿದ್ದು ಅವುಗಳನ್ನು ಬಳಸಿ ಜ್ಞಾನ ವೃದ್ಧಿಸಿಕೊಳ್ಳಲು ತಿಳಿಸುವುದು.
  • ಪದ ಬಂಧ , ಸಾಮನ್ಯ ಜ್ಞಾನ, ವಾಕ್ಯ ರಚನಾ, ಗಣಿತ ಲೆಕ್ಕಗಳ ಅನೇಕ ಮನರಂಜನಾ ಅ್ಯಪ್ ಗಳು ಲಭ್ಯ ವಿದ್ದು ಅವುಗಳ ಸದ್ಬಳಕೆಯಿಂದ ನಮ್ಮ ಕಲಿಕೆ ಹೇಗೆ ವೃದ್ಧಿ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸುವುದು.
  • ಅನ್ ಲೈನ್ ತರಗತಿಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಬೋಧನೆಯನ್ನು ಮಾಡುವುದು.
ವಠಾರದ ಮಕ್ಕಳ ಗುಂಪು ರಚಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ತಿಳಿಸುವುದು.
ಹೀಗೆ ಹಲವಾರು ಪ್ರಮುಖ ತಂತ್ರಗಳ ಮುಖಾಂತರ ಇಂತಹ ವಿಷಮ ಸ್ಥಿತಿಯನ್ನು ಸದುಪಯೋಗ ಪಡೆದು ಕಲಿಕೆಯಲ್ಲಿ ತೊಡಗಿಸಿಕೊಳ್ಳ ಬಹುದು.
ಶ್ರೀಮತಿ ಸರಿತಾ ಸ.ಶಿ.
ಸರಕಾರಿ ಆದರ್ಶ ವಿದ್ಯಾಲಯ ಬೇಮಳಖೇಡ
ತಾ: ಹುಮನಾಬಾದ, ಜಿ: ಬೀದರ್.

ಅಸೈನ್ಮೆಂಟ ೯

ಸದರಿ ಮನೆಯಿಂದಲೇ ಕೆಲಸದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳುವ ಕುರಿತಂತೆ ೪೦೦ ಪದಗಳ ಲೇಖನ:
 " ಕ್ಷಣ ಹೊತ್ತು ಅಣಿ ಮುತ್ತು" ಅನ್ನುವ ಹೇಳಿಕೆಯಂತೆ ಉತ್ತಮವಾದ ಕೆಲಸಕ್ಕೆ ವಿನಿಯೋಗಿಸಿದ ಸಮಯೂ ಸದಾ ಅಮೂಲ್ಯ ವಾಗಿರುತ್ತದೆ. ಆ ಅಮೂಲ್ಯವಾದ ಕೊಡುಗೆಯನ್ನು ನಾವು ನಮ್ಮ ಜೀವನದಲ್ಲಿ ಸದಾ ಉಪಯುಕ್ತವಾಗಿ ಉಪಯೋಗಿಸಿಕೊಳ್ಳಬಹುದು.
ಇಡೀ ಜಗತ್ತಿನ ಜನತೆ ಕೊರೊನಾ ಎಂಬ ಮಹಾಮಾರಿಗೆ ತಲ್ಲಣಿಸಿ ಹೋಗಿದೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಡೀ ವಿಶ್ವದ ಜನತೆ ಅನೇಕ ಸಂಕಷ್ಟ ಸವಾಲುಗಳನ್ನು ಎದುರಿಸುತ್ತಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಎಲ್ಲ ರೀತಿಯಿಂದಲೂ ಇಡೀ ಸಮಾಜ ಅನೇಕ ಸವಾಲುಗಳನ್ನು ಎದುರಿಸುತ್ತಿದೆ.
'ಆರೋಗ್ಯವೇ ಭಾಗ್ಯ' ಎನ್ನುವ ಗಾದೆ ಮಾತಿನಂತೆ ಕೋವಿಡ್ ಮಹಾಮಾರಿ ಎಲ್ಲರಲ್ಲೂ ಆರೋಗ್ಯದ ಜಾಗೃತಿ ಮೂಡಿಸಿದೆ. 'ಜೀವ ಉಳಿದರೆ ಜೀವನ'. ಆದರೆ ಈ ಎಲ್ಲ ಸವಾಲುಗಳ ಮಧ್ಯೆ ಜೀವನ ನಡೆಸಲೇಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಶಿಕ್ಷಣ ಇಲಾಖೆ ಶಿಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶವನ್ನು ಒದಗಿಸಿದೆ.
ಈ ಸಮಯವನ್ನು ನಾವು ವ್ಯರ್ಥ ಮಾಡದೆ ಸರಿಯಾಗಿ ಉಪಯೋಗಿಸುವ ಮೂಲಕ ಈ ಯೋಜನೆಯ ಸಾರ್ಥಕತೆಯನ್ನು ಅನುಭವಿಸಬಹುದು. ಹಲವು ಬಗೆಯ ಪುಸ್ತಕಗಳನ್ನು ಓದಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪೂರಕವಾಗಿದೆ. ವಿಡಿಯೋ ಮತ್ತು ಆಡಿಯೋಗಳ ತಯಾರಿಯು ಹೊಸದಾದ ಅನುಭವವನ್ನು ನೀಡುತ್ತದೆ. ನಾವು ಬೋಧಿಸುವ ವಿಧಾನ ಹಾಗೂ ನಮ್ಮ ಬೋಧನೆಯನ್ನು ನಾವೇ ಸ್ವತಃ ವೀಕ್ಷಿಸಿ ಅವಲೋಕನ ಮಾಡಿಕೊಳ್ಳಲು ಒಂದು ಪ್ರಮುಖ ಸಾಧನವಾಗಿದೆ. ಹೊಸ ಕಲಿಕೋಪಕರಣಗಳ ತಯಾರಿಕೆ, ಪಾಠ ಯೋಜನೆಯ ಸಿದ್ಧತೆ, ಪ್ರಶ್ನೆ ಪತ್ರಿಕೆಯ ಸಿದ್ಧತೆ, ಸೇತುಬಂಧ ಯೋಜನೆ ಸಿದ್ಧತೆ,ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳ ವೀಕ್ಷಣೆ ಇವು ನಮ್ಮ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ನಮಗೆ ಹೊಸ ವಿಷಯ ಬೋಧನಾ ವಿಧಾಗಳನ್ನು ಕೂಡಾ ಕಲಿಯಲು ಅವಕಾಶ ನೀಡಿತು. ಮಕ್ಕಳ ಕಲಿಕೆಗೆ ಸಂಬಂಧಿಸಿದ ಅನೇಕ ಅ್ಯಪಗಳನ್ನು ತಿಳಿದುಕೊಳ್ಳಲು ಸಹಾಯವಾಯಿತು. ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳೊಂದಿಗಿನ ಸಂಭಾಷಣೆ ನಮ್ಮನ್ನು ಶಾಲೆಯ ವಾತವರಣ ನೆನಪಿಸಿತು, ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ನಿಂದ ಹೇಗೆ ನಮ್ಮನ್ನು ಸುರಕ್ಷಿತವಾಗಿ ಇರಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸುವುದರ ಮೂಲಕ ಅವರಲ್ಲಿದ್ದ ಆತಂಕವನ್ನು ದೂರ ಮಾಡಿ, ಮನೆಯಿಂದಲೇ ಹೇಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳು ಹೇಗೆ ಮನೆಯಿಂದಲೇ ಬೋಧನೆ-ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಅರಿಯಲು ಸಾಧ್ಯವಾಯಿತು. ಒಟ್ಟಿನಲ್ಲಿ ಈ ಮನೆಯಿಂದಲೇ ಕೆಲಸದಡಿಯಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ಹೆಚ್ಚು ತಿಳಿದುಕೊಳ್ಳಲು ಸಹಾಯವಾಯಿತು. ಮೊಬೈಲ್ ಫೋನ್ ನನ್ನು ಎಷ್ಟು ಉತ್ತಮ ರೀತಿಯಲ್ಲಿ ಉಪಯೋಗಿಸಬಹುದು ಎಂದು ತಿಳಿಯಲಾಯಿತು. ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೇಗೆಲ್ಲಾ ಮಾಡಬಹುದು ಎಂಬುವುದನ್ನು ಪ್ರಾಯೋಗಿಕವಾಗಿ ತಿಳಿಯಲು ಇದು ಒಂದು ಉತ್ತಮ ಸದಾವಕಾಶ. 

ಶ್ರೀಮತಿ ಸರಿತಾ ಸ.ಶಿ.
ಸರಕಾರಿ ಆದರ್ಶ ವಿದ್ಯಾಲಯ ಬೇಮಳಖೇಡ
ತಾ: ಹುಮನಾಬಾದ, ಜಿ: ಬೀದರ್

Friday, 24 July 2020

ಅಸೈನ್ಮೆಂಟ-೮

ಪಾಠ/ವಿಷಯಕ್ಕೆ ಸಂಬಂಧಿಸಿದ ಕ್ವಿಜ್ ಬ್ಯಾಂಕ್ ವಿವರ:

ಅಸೈನ್ಮೆಂಟ-೭

ಸಾಮರ್ಥ್ಯಗಳನ್ನಾಧರಿಸಿ ಸಿದ್ಧಪಡಿಸಿದ ಸೇತುಬಂಧ ಕುರಿತ ಯೋಜನೆ ವಿವರ:

ಅಸೈನ್ಮೆಂಟ -೬

ದೂರವಾಣಿ/ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿದ ಸಹೊದ್ಯೋಗಿ ಹೆಸರು, ದೂರವಾಣಿ ಸಂಖ್ಯೆ, ಚರ್ಚಿಸಿದ ವಿಷಯದ ವಿವರ:

ಅಸೈನ್ಮೆಂಟ-೫

ವೀಕ್ಷಿಸಿದ ವೀಡಿಯೋ/ಸಣ್ಣ ಟಿಪ್ಪಣಿ ಮೂಲಕ ವಿವರಣೆ
*ಕನ್ನಡ ವ್ಯಾಕರಣ ಸಂಧಿಗಳು, ಸಂಧಿಗಳ ವಿಧಗಳು, ಸಂಧಿಗಳ ವ್ಯಾಖ್ಯಾನ ಕುರಿತು ತಿಳಿದುಕೊಳ್ಳಲಾಯಿತು.

*ಕನ್ನಡ ವ್ಯಾಕರಣ ಸಮಾಸಗಳು , ಸಮಾಸಗಳ ವಿಧಗಳು, ವ್ಯಾಖ್ಯಾನ ಹಾಗೂ ಅನೇಕ ಸಮಾಸದ ಉದಾಹರಣೆಗಳನ್ನು ವೀಕ್ಷಿಸಲಾಯಿತು.
*ಪುನರ್ಮನನ ತರಗತಿಗಳ ವಿಡಿಯೋದಲ್ಲಿ ದ್ವಿತೀಯ ಭಾಷೆ ಕನ್ನಡ ೧೦ ನೇ ತರಗತಿ ಪಾಠಗಳನ್ನು ವೀಕ್ಷಿಸಲಾಯಿತು.
*ಕನ್ನಡ ವರ್ಣಮಾಲೆಗಳ ಬರೆಯುವ ಕ್ರಮವನ್ನು ವೀಕ್ಷಿಸಲಾಯಿತು.
*ನಾಮಪದ, ನಾಮಪ್ರಕೃತಿ, ವಿಭಕ್ತಿ ಪ್ರತ್ಯಯಗಳ ಕುರಿತು ವಿವರವಾದ ಮಾಹಿತಿಯನ್ನು ಪಡೆಯಲಾಯಿತು.
*ಕ್ರಿಯಾಪದ, ವಿದ್ಯರ್ಥಕ, ನಿಷೇಧಾರ್ಥಕ, ಸಂಭವನಾರ್ಥಕ, ಪ್ರೇರಣಾರ್ಥಕ ಪದಗಳ ಕುರಿತು ತಿಳಿಯಲಾಯಿತು.

*ವಿಭಕ್ತಿ ಪ್ರತ್ಯಯಗಳನ್ನು ವಿವರಣೆಯೊಂದಿಗೆ ವೀಕ್ಷಿಸಲಾಯಿತು.
* ಮೂಡಲ ಕುಣಿಗಲ್ ಕೆರೆ ಜನಪದ ಗೀತೆಯನ್ನು ವೀಕ್ಷಿಸಲಾಯಿತು.

ಅಸೈನ್ಮೆಂಟ-೪

ಕಲಿಕೋಪಕರಣಗಳು/ಪಾಠೋಪಕರಣಗಳು
ವಿಭಕ್ತಿ ಪ್ರತ್ಯಯಗಳ ಚಾರ್ಟ

ಸಂಧಿಗಳು